ಗೋಲ್ಡನ್ ಕ್ವಾದ್ರಿಲತೆರಲ್ ವು ಭಾರತ ದಲ್ಲಿನ ಹೆದ್ದಾರಿಗಳ ಜಾಲವಾಗಿದ್ದು ಇದು ದೆಹಲಿ , ಮುಂಬಯಿ , ಕೋಲ್ಕತ್ತಾ ಮತ್ತು ಚೆನ್ನೈ ಗಳನ್ನು ಸೇರಿಸುತ್ತದೆ, ಹಾಗು ಇದು ಚತುಷ್ಪಥ ಮಾದರಿಯ ರಸ್ತೆಯ ವರ್ಗಗಳನ್ನಾಗಿ ಮಾಡಿವೆ. ಭಾರತ ದಲ್ಲಿ ಅತಿ ಉದ್ದದ ಹೆದ್ದಾರಿ ಯೋಜನೆಯನ್ನು ಅಟಲ್ ಬಿಹಾರಿ ವಾಜಪೇಯೀ ಆರಂಭಿಸಿದರು , ಇದು ಮೊದಲನೇ ಹಂತದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ (ನ್ಯಾಷನಲ್ ಹೈ ವೇ ಡೆವಲಪ್ಮೆಂಟ್ ಪ್ರಾಜೆಕ್ಟ್ - ) ಆಗಿದ್ದು, ಮತ್ತು ೫,೮೪೬ ಕಿಲೋಮೀಟರ್ ಗಳ ನಾಲ್ಕು/ಆರು ಮಾರ್ಗಗಳ ಅತಿ ವೇಗದ ಹೆದ್ದಾರಿಯ ವೆಚ್ಚ ೬೦,೦೦೦ ಕೋಟಿ ರೂಪಾಯಿಗಳಷ್ಟು ನಿರ್ಮಾಣವನ್ನು ಒಳಗೊಂಡಿದೆ. (೧೯೯೯ರ ಬೆಳೆಗಳ ಪ್ರಕಾರ $ ೧೨.೩೧೭ ಬಿಲಿಯನ್). , ಚಿನ್ನದ ಚತುಷ್ಪಥವು, ಭಾರತದ ರಸ್ತೆ ಜಾಲಗಳಲ್ಲಿನ ಶೇಕಡಾ ೨ ರಷ್ಟನ್ನು ಪೂರೈಸಿದರೆ, ರಾಷ್ಟ್ರದ ಟ್ರಾಫಿಕ್ ಗಳಲ್ಲಿನ ಸುಮಾರು ಶೇಕಡಾ ೪೦ ಅನ್ನು ಕೊಂಡೊಯ್ಯುತ್ತದೆ ಮತ್ತು ರಸ್ತೆ ಸಾವುಗಳಲ್ಲಿನ ಮೂರನೇ ಒಂದು ಭಾಗವನ್ನು ಲೆಕ್ಕಕ್ಕೆ ಸೇರಿಸಿದಂತಾಗುತ್ತದೆ. ವಿಶಾಲ ಹಾಗೂ ಪ್ರಮುಖವಾದ ಚಿನ್ನದ ಚತುಷ್ಪಥವು (ಜಿ.ಕ್ಯು) ಹತೋಟಿಯ ಮಾರ್ಗ ಅಲ್ಲ , ಆದಾಗ್ಯೂ ಕ್ಷೇಮಕರ (ರಕ್ಷಣಾ)ಲಕ್ಷಣಗಳಾದ ರಸ್ತೆಯಾ ಇಕ್ಕೆಲಗಳಲ್ಲಿರುವ ಹಳಿಯ ರಕ್ಷಕಗಳು, ರಸ್ತೆಯ ಭುಜಗಳು, ಮತ್ತು ಎತ್ತರಕ್ಕೆ ಕಾಣುವ ಚಿನ್ಹೆಗಳನ್ನು ಉಪಯೋಗಿಸಲಾಗಿದೆ. ೨೦೦೭ ಸೆಪ್ಟಂಬರ್ ವರೆಗೆ ಸಂಪೂರ್ಣ ಕೆಲಸದಲ್ಲಿನ ಶೇಕಡಾ ೯೬ ಭಾಗವನ್ನು ಮುಗಿಸಲಾಗಿದೆ. ಆದರೆ ೨೦೦೯ ಸೆಪ್ಟಂಬರ್ ನಲ್ಲಿ, ಪ್ರಚಲಿತದಲ್ಲಿರುವ ನಾಲ್ಕು-ಲೇನ್ ಗಳ ಹೆದ್ದಾರಿಯನ್ನು ಆರು-ಲೇನ್ ಗಳ ಹೆದ್ದಾರಿಯನ್ನಾಗಿ ಬದಲಾಯಿಸಲಾಗುವುದೆಂದು ಪ್ರಕಟಿಸಲಾಗಿದೆ. ವರದಿಯಂತೆ, ಈ ಯೋಜನೆಯು ವಿವಿಧ ಹಂತಗಳಲ್ಲಿ ತಪ್ಸೀಲಿನಿಂದ ಹಿಂದುಳಿದ್ದಿದ್ದು, ಪ್ರಮುಖವಾಗಿ ಭೂ ಕಬಳಿಕೆಯ ಅದಚಣೆಗಳಿಂದಾಗಿ ಮತ್ತು ಕಂಟ್ರಾಕ್ಟರ್ ಗಳ ಜೊತೆಯ ಜಗಳದಿಂದಾಗಿ ಮತ್ತೆ ಮಾತುಕತೆ ನಡೆಸಬೇಕಾಗಿದೆ. ಜಿ.ಕ್ಯು ಯೋಜನೆಯನ್ನು ಭಾರತದ ಅಧಿಕೃತ ರಾಷ್ಟ್ರೀಯ ಹೆದ್ದಾರಿ ಯು ನಿರ್ವಹಿಸುತ್ತಿದ್ದು , (ಎನ್ ಹೆಚ್ ಎ ಐ) ಇದು ರಸ್ತೆ, ಸಾರಿಗೆ ಸಂಪರ್ಕ ಮತ್ತು ಹೆದ್ದಾರಿಗಳ ಕಾರ್ಯಾಲಯ ದ ಕೆಳಗಿದೆ. ಭಾರತದಲ್ಲಿ ಮುಂಬಯಿ-ಪುಣೆ ಎಕ್ಸ್ ಪ್ರೆಸ್ ವೇ,ಅನ್ನು ಮೊದಲು ಸುಂಕದ ರಸ್ತೆಯ ಮೇಲ್ವಿಚಾರಕ ಮಾರ್ಗ ವನ್ನಾಗಿ ಕಟ್ಟಬೇಕಾಗಿದ್ದು, ಇದು ಚತುಷ್ಪಥ ಯೋಜನೆಯ ಭಾಗವಾಗಿದ್ದರೂ ಎನ್ ಹೆಚ್ ಎ ಐ ನಿಂದ ದೇಣಿಗೆ ಕೊಟ್ಟಿಲ್ಲ ಮತ್ತು ಪ್ರಮುಖ ಹೆದ್ದಾರಿಯಿಂದ ಬೇರೆಯಾಗಿದೆ. ಚಿನ್ನದ ಚತುಷ್ಪಥದ ಯೋಜನೆಯಲ್ಲಿನ ಇನ್ಫ್ರಾ ಸ್ಟ್ರಕ್ಚರಲ್ ಅಭಿವೃದ್ಧಿಯ ಚಟುವಟಿಕೆಗಳಿಗೆ ಇರುವ ಪ್ರಮುಖ ಕೊಡುಗೆದಾರರಲ್ಲಿ ಇನ್ಫ್ರಾ ಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಸಯಲ್ ಸೇರ್ವಿಸೆಸ್ (ಐ ಎಲ್ & ಎಫ್ ಎಸ್)ಕೂಡ ಒಂದಾಗಿದೆ. == ಆರ್ಥಿಕ ಲಾಭಗಳು == ಚಿನ್ನದ ಚತುಷ್ಪಥ ಯೋಜನೆಯು, ಅನೇಕ ಪ್ರಮುಖ ನಗರಗಳು ಮತ್ತು ರೇವು ಪಟ್ಟಣಗಳ (ಬಂದರು) ಮದ್ಯೆ ಉತ್ತಮವಾದ ಮತ್ತು ಅತಿ ವೇಗದ ಸಾರಿಗೆ ಸಂಪರ್ಕದ ಜಾಲಗಳನ್ನು ಸ್ಥಾಪಿಸಿದೆ. ಇದು, ಭಾರತದಲ್ಲಿರುವ ಜನರು ಮತ್ತು ಉತ್ಪಾದನೆಗಳನ್ನು ಸುಲಭ ಹಾಗೂ ಸರಾಗವಾಗಿ ಸಾಗಿಸಲು ಹುರುಪನ್ನು ಒದಗಿಸುತ್ತದೆ. ಇದು ಸಣ್ಣ ಪಟ್ಟಣಗಳಿಗೆ ಮಾರುಕಟ್ಟೆಗಳ ಪ್ರವೇಶನದ ಮುಖಾಂತರ ಕೈಗಾರಿಕೆ ಮತ್ತು ಉದ್ಯೋಗದ ಬೆಳವಣಿಗೆಯನ್ನು ಬಲಪಡಿಸುತ್ತದೆ. ರೈತರಿಗೆ ಉತ್ತಮ ಸಾರಿಗೆ ಸಂಪರ್ಕದ ಮೂಲಕ ತಮ್ಮ ಬೇಸಾಯದ ಹಿನ್ನಾಡಿನ ಉತ್ಪನ್ನಗಳನ್ನು, ನಷ್ಟ ಮತ್ತು ಹಾಳಾಗುವುದನ್ನು ಕಡಿಮೆಗೊಳಿಸುವ ಹಾದಿಯಲ್ಲಿ, ಪ್ರಮುಖ ನಗರಗಳು ಮತ್ತು ಬಂದರುಗಳಿಗೆ ರಫ್ತು ಮಾಡಲು ಅವಕಾಶಗಳನ್ನು ಒದಗಿಸುತ್ತದೆ. ಕೊನೆಯದಾಗಿ, ಇದು ಕಟ್ಟಡ ನಿರ್ಮಾಣದ ಮುಖಾಂತರ ನೇರವಾಗಿ ಹಾಗೆಯೇ ಅಪರೋಕ್ಷವಾಗಿ ಸಿಮೆಂಟ್, ಉಕ್ಕು ಮತ್ತು ಇತರ ಕಟ್ಟಡ ರಚನೆಯ ಸರಕು ಸಾಮಗ್ರಿಗಳ ಬೇಡಿಕೆಯು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ. == ಮಾರ್ಗ == ರಾಷ್ಟ್ರೀಯ ಹೆದ್ದಾರಿಗಳ ನ್ನು ಮಾತ್ರ ಚಿನ್ನದ ಚತುಷ್ಪಥದಲ್ಲಿ ಉಪಯೋಗಿಸಿಕೊಳ್ಳಲಾಗಿದೆ. ಈ ಚತುಷ್ಫಥದ ನಾಲ್ಕು ಕಾಲುಗಳು, ಈ ಕೆಳಗಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದೆ: ದೆಹಲಿ - ಕೋಲ್ಕತ್ತಾ : ಎನ್ ಹೆಚ್ 2 ದೆಹಲಿ - ಮುಂಬಯಿ : ಎನ್ ಹೆಚ್ 8 (ದೆಹಲಿ - ಕಿಶಂಗರ್ ), ಎನ್ ಹೆಚ್ 79 ಎ (ಅಜ್ಮೀರ್ ಬೈ ಪಾಸ್ ), ಎನ್ ಹೆಚ್ 79 (ನಸಿರಾಬಾದ್ - ಚಿತ್ತುರ್ಗರ್ ), ಎನ್ ಹೆಚ್ 76 (ಚಿತ್ತುರ್ಗರ್ - ಉದೈಪುರ್ ), ಎನ್ ಹೆಚ್ 8 (ಉದೈಪುರ್ - ಮುಂಬಯಿ ) ಮುಂಬಯಿ - ಚೆನ್ನೈ : ಎನ್ ಹೆಚ್ 4 (ಮುಂಬಯಿ - ಬ್ಯಾಂಗಳೂರ್ ), ಎನ್ ಹೆಚ್ 7 (ಬ್ಯಾಂಗಳೂರ್ - ಕೃಷ್ಣಗಿರಿ ), ಎನ್ ಹೆಚ್ 46 (ಕೃಷ್ಣಗಿರಿ - ರಾಣಿ ಪೇಟ್ ), ಎನ್ ಹೆಚ್ 4 (ರಾಣಿ ಪೇಟ್ - ಚೆನ್ನೈ ) ಕೋಲ್ಕತ್ತಾ - ಚೆನ್ನೈ : ಎನ್ ಹೆಚ್ 6 (ಕೋಲ್ಕತ್ತಾ - ಖರಗ್ಪುರ್ ), ಎನ್ ಹೆಚ್ 60 (ಖರಗ್ಪುರ್ - ಬಳಸೋರೆ ), ಎನ್ ಹೆಚ್ 5 (ಬಳಸೋರೆ - ಚೆನ್ನೈ ) == ಮುಖ್ಯ ನಗರಗಳು == == ಪ್ರಚಲಿತ ಸ್ಥಿತಿ == == ಪ್ರತೀ ರಾಜ್ಯದಲ್ಲಿರುವ ಚಿನ್ನದ ಚತುಷ್ಪಥದ ಉದ್ದ == ಮುಗಿದಿರುವ ಚಿನ್ನದ ಚತುಷ್ಪಥಗಳು ಭಾರತದ ೧೩ ರಾಜ್ಯಗಳ ಮುಖಾಂತರ ಹಾದು ಹೋಗುತ್ತವೆ. ಆಂಧ್ರ ಪ್ರದೇಶ - ೧,೦೧೪ ಕಿಮಿ ಉತ್ತರ ಪ್ರದೇಶ - ೭೫೬ ಕಿಮಿ ರಾಜಸ್ಥಾನ - ೭೨೫ ಕಿಮಿ ಕರ್ನಾಟಕ - ೬೨೩ ಕಿಮಿ ಮಹಾರಾಷ್ಟ್ರ - ೪೮೭ ಕಿಮಿ ಗುಜರಾತ್ - ೪೮೫ ಕಿಮಿ ಒಡಿಶಾ - ೪೪೦ ಕಿ ಮಿ ವೆಸ್ಟ್ ಬೆಂಗಾಲ - ೪೦೬ ಕಿಮಿ ತಮಿಳು ನಾಡು - ೩೪೨ ಕಿಮಿ ಬಿಹಾರ - ೨೦೪ ಕಿ ಮಿ ಝಾರ್ಖಂಡ್ - ೧೯೨ ಕಿಮಿ ಹರಿಯಾಣ - ೧೫೨ ಕಿಮಿ ದೆಹಲಿ - ೨೫ ಕಿ ಮಿ ಒಟ್ಟು - ೫,೮೪೬ ಕಿಮಿ == ಮುಂದಿನ ಯೋಜನೆಗಳು == ಪರಿಚ್ಛೇಧ ಎನ್ ಹೆಚ್ -೨, ಎನ್ ಹೆಚ್ -೫ ಮತ್ತು ಎನ್ ಹೆಚ್ -೮ ರಸ್ತೆಗಳನ್ನು ಡಿಬಿಎಫ್ಓ (ಚಿತ್ರ , ರಚನೆ , ಹಣಕಾಸು , ಕಾರ್ಯ ನಡೆಸು ) ಮಾದರಿಯಡಿಯಲ್ಲಿ ಆರು-ಲೇನ್ ಗಳಿಗಾಗಿ ಮತ್ತೆ ವಿಶಾಲಗೊಳಿಸಲು ಪ್ರಾಮುಖ್ಯತೆಯನ್ನು ಕೊಡಲಾಗಿದೆ ಮತ್ತು ಇನ್ನು ಹೆಚ್ಚು ಪರಿಚ್ಛೇಧಗಳನ್ನು ಸಧ್ಯದಲ್ಲೇ ಆರು-ಲೇನ್ ಗಳಾಗಿ ಪರಿವರ್ತಿಸುವ ಸಾಧ್ಯತೆ ಇದೆ. ವಡೋದರದಿಂದ ಸೂರತ್ ವರೆಗೆ ಎನ್ ಹೆಚ್-೮ ರ ಆರು ಲೇನ್ ಗಳ ಕೆಲಸ ಮುಗಿದಿದೆ ಮತ್ತು ಈಗ ಇದು ಆರು-ಲೇನ್ ಗಳ ಹೆದ್ದಾರಿಯಾಗಿದೆ. == ಭ್ರಷ್ಟತೆಯ ಆಪಾದನೆ == ೨೦೦೩ ಆಗಸ್ಟ್ ರಲ್ಲಿ ಝಾರ್ಖಂಡ್-ಮೂಲದ ಯೋಜನೆಯ ನಿರ್ದೇಶಕ ಸತ್ಯೇಂದ್ರ ದುಬೇ, ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ , ಬಿಹಾರ್‌ನಲ್ಲಿರುವ ಹೆದ್ದಾರಿಯ ಪರಿಚ್ಚೇಧದಲ್ಲಿ ನಡೆಯುತ್ತಿರುವ ಭ್ರಷ್ಟತೆಯನ್ನು ವಿವರಿಸಿದ್ಧಾನೆ. ದುಬೇಯ್ ನ ಪ್ರತಿಪಾದನೆಯಲ್ಲಿ, ದೊಡ್ಡ ಕಟ್ಟಡ ನಿರ್ಮಾಣಗಾರರು ಎನ್ಹೆಚ್ಎಐ ನ ಆಡಳಿತಾಧಿಕಾರಿಗಳಿಂದ ಒಳಗಿನ ವಿಚಾರಗಳನ್ನು ಹೊಂದಿದ್ದಾರೆಂದೂ ಸೇರಿಸಲಾಗಿದೆ , ಕಂಟ್ರಾಕ್ಟರ್ ಗಳು ತಮಗೆ ವಹಿಸಿರುವ ನಿಗದಿತ ಉದ್ದದದಲ್ಲಿ ಕಾರ್ಯಗೊಳಿಸುತ್ತಿಲ್ಲ (ಒಪ್ಪಂದದಲ್ಲಿ ಕರಾರು ಮಾಡಿದಂತೆ), ಆದರೆ ಕೆಲಸವನ್ನು ತಾಂತ್ರಿಕ ತಜ್ಞ ದ ಕೊರತೆಯಿರುವ ಸಣ್ಣ ಬಿಲ್ಡರ್ ಗಳಿಗೆ ಒಪ್ಪಿಸಿ ಮತ್ತು ಮುಂಗಡವಾಗಿ ಹಣವನ್ನು ಕೊಟ್ಟ ನಂತರ ಅವರ ಕೆಲಸವನ್ನು ಗಮನಿಸದೇ ಇರುವುದು ಎಂದು ಹೇಳಿದ್ದನು. ದುಬೇ ನ ಹೆಸರು ಪಿಎಂಓ ನಿಂದ ಎನ್ಹೆಚ್ಎಐ ಗೆ ತಿಳಿದಿದ್ದುದರಿಂದ, ಮತ್ತು ಅವನ ಇಚ್ಚೆಗೆ ವಿರುದ್ಧವಾಗಿ ಅವನನ್ನು ಗಯಾ, ಬಿಹಾರ್ ಗೆ ಸ್ಥಳಾಂತರಿಸಿ, ನವಂಬರ್ ೨೭ ರಲ್ಲಿ ಅವನನ್ನು ಕೊಲೆ ಮಾಡಲಾಯಿತು. ದುಬೇ ನ ಆಪಾದನೆಗಳ ಧೃಡೀಕರಣೆ ನಂತರ, ಎನ್ಹೆಚ್ಎಐ ಅವನ ಆಪಾದನೆಗಳನ್ನು ಒಪ್ಪಿಕೊಂಡು, ಕಂಟ್ರಾಕ್ಟರ್ ಗಳ ಆಯ್ಕೆಗಳು ಮತ್ತು ನಿಯಮಾವಳಿಗಳಲ್ಲಿ "ಆಮೂಲಾಗ್ರ ಸುಧಾರಣೆ"ಯನ್ನು ಮಾಡಿದು. ಸುಧೀರ್ಘ ಸಿ ಬಿ ಐ ತನಿಖೆಯ ನಂತರ, ಮಂತು ಕುಮಾರ್ ಮತ್ತು ಅವರ ಮೂವರು ಜೊತೆಗಾರರು ಕೊಲೆಯ ಮೇಲಿನ ಆಪಾದನೆಗಾಗಿ ದಾವೆ ಹಾಕಿ ಬಂಧಿಸಲಾಯಿತು; ಆದಾಗ್ಯೂ ಮಂತು, ೨೦೦೫ ಸಪ್ಟೆಂಬರ್ ೧೯ ರಲ್ಲಿ ಕೋರ್ಟ್ ನಿಂದ ತಪ್ಪಿಸಿಕೊಂಡನು ಮತ್ತು ಇನ್ನೂ ಓಡುತ್ತಲೇ ಇದ್ದಾನೆ. == ಅಫಘಾತಗಳು == ೨೦೦೬ ಫೆಬ್ರವರಿಯಲ್ಲಿ, ಕೋಲ್ಕತ್ತಾ ದಿಂದ ಚೆನ್ನೈ ಗೆ ಸಂಪರ್ಕಿಸುವ ಹೆದ್ದಾರಿಯಲ್ಲಿ, ೬೦೦ ಮೀಟರ್ ಉದ್ದದಷ್ಟು ರಸ್ತೆಯು ಭೂಮಿಯೊಳಗೆ ತಗ್ಗಿ ಹೋಯಿತು, ಮತ್ತೆ ಪಶ್ಚಿಮ ಬಂಗಾಲ ದ ಬ್ಯಾಲ್ಲಿಯಲ್ಲಿ ಈ ಹಳ್ಳದಿಂದ ಹತ್ತು ಮೀಟರ್ ನಷ್ಟು ದೊಡ್ಡದಾದ ಕಂದರವನ್ನು ಮಾಡಿದೆ. ಈ ಉದ್ದವು ಈಗ ಒಂದು ವರ್ಷಗಳ ಹಿಂದೆ, ಗ್ಲೋಬಲ್ ಟೆನ್ಡರಿಂಗ್ನಲ್ಲಿ ಆಯ್ಕೆಯಾದ ಮಲೇಷಿಯನ್ ಮಲ್ಟಿ ನ್ಯಾಷನಲ್ ಫರ್ಮ್ ನಿಂದ ಪೂರ್ಣಗೊಂಡಿದೆ. == ಇವನ್ನೂ ಗಮನಿಸಿ == ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆಯಿಂದ ಭಾರತದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿ. ಭಾರತದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ. ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮಗಳ ಮೊಗಸಾಲೆ. ಭಾರತದಲ್ಲಿನ ಸಾರಿಗೆ-ಸಂಪರ್ಕ . == ಹೆಚ್ಚಿನ ಮಾಹಿತಿಗಾಗಿ == ಫಾಸ್ಟ್ ಲೇನ್ ಟು ದಿ ಫ್ಯೂಚರ್ 2008-09-18 ವೇಬ್ಯಾಕ್ ಮೆಷಿನ್ ನಲ್ಲಿ. , ಡಾನ್ ಬೆಲ್ಟ್ . ನ್ಯಾಷನಲ್ ಜಿಯಾ ಗ್ರಾಫಿಕ್ , ಅಕ್ಟೋಬರ್ , ೨೦೦೮. == ಹೊರಗಿನ ಕೊಂಡಿಗಳು == 'ಮೈಲ್ ಬೈ ಮೈಲ್ , ಇಂಡಿಯಾ ಪೇವ್ಸ್ ಎ ಸ್ಮೂಥೆರ್ ಫ್ಯೂಚರ್ ' - ಬಹಳ ವಿಸ್ತಾರವಾದ ನ್ಯೂ ಯಾರ್ಕ್ ಟೈಮ್ಸ್ ಲೇಖನ , ದಿನಾಂಕ ಡಿಸಂಬರ್ ೪, ೨೦೦೫ (ಉಚಿತ ನೋಂದಣಿಯ ಅಗತ್ಯವಿದೆ. ) "ಗೋಲ್ಡನ್ ಕ್ವಾದ್ರಿಲೇತರಲ್ ಸ್ಟಿಲ್ ಹ್ಯಾಸ್ ಮೈಲ್ಸ್ ಟು ಗೋ { /1}" - ಫೈನಾನ್ಶಿಯಲ್ ಎಕ್ಸ್ ಪ್ರೆಸ್‌ಲೇಖನದ ದಿನಾಂಕ ಆಗಸ್ಟ್ ೨೬, ೨೦೦೫ ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾದ ಅಧಿಕೃತ ಅಂತರಜಾಲ 2016-06-11 ವೇಬ್ಯಾಕ್ ಮೆಷಿನ್ ನಲ್ಲಿ. ಎನ್ ಎಚ್ ಎ ಐ ನ ಅಂತರಜಾಲದಲ್ಲಿ ಚಿನ್ನದ ಚತುಷ್ಪಥದ ಪ್ರಗತಿಯ ಭೂಪಟ. 2016-03-04 ವೇಬ್ಯಾಕ್ ಮೆಷಿನ್ ನಲ್ಲಿ. ರಸ್ತೆ ಸಾರಿಗೆ ಇಲಾಖೆ (ಮಂತ್ರಿ ಮಂಡಲ)